
ಆತ್ಮೀಯರೇ,
ಬಹುದಿನಗಳಿಂದ ಇದ್ದ ಬ್ಲಾಗ್ ಅನ್ನು ಬಿಚ್ಚದೆ ಹಾಗೆ ಇಟ್ಟಿದ್ದೆ. ಅದರ ಕಡೆ ತಿರುಗಿಯೂ ಸಹ ನೋಡೋ ಮನಸ್ಸಾಗಲಿಲ್ಲ ಕಾರಣ ಅವನ ಅಗಲಿಕೆ. ಈ ಬ್ಲಾಗ್ ಆರಂಭಿಸಿದಾಗ ಮೊದಲು ತೋರಿಸಿದ್ದೇ ಅವನಿಗೆ...... ಅವನ ದೃಷ್ಟಿಯಲ್ಲಿ ಈ ಬ್ಲಾಗ್ ನೋಡಿದ ಅವನು ಏನೋ ಸಾಧನೆ ಮಾಡಿದವರಂತೆ ನನ್ನನ್ನ ಕೊಂಡಾಡಿದ್ದ.... ಬರೀ ಎಂದು ಬೆನ್ನು ತಟ್ಟಿದ್ದ.... ಅವನೇ ಇಲ್ಲದಾದ ಹಾಗಾಗಿ ನನ್ನಲ್ಲಿದ್ದ ಎಲ್ಲ ಉತ್ಸಾಹಗಳು ಕಮರಿ ಹೋದವು.
ವಿದ್ಯುನ್ಮಾನ ಮಾಧ್ಯಮದಲ್ಲಿ ಸುಮಾರು 8ವರ್ಷಗಳ ಕಾಲ ಅತ್ಯುತ್ತಮವಾದ ಸೇವೆ ಸಲ್ಲಿಸಿ. ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿದ ಗೆಳೆಯ ರವೀಂದ್ರನ ಕುರಿತು ಬರೆಯಲು ಪ್ರಾರಂಭಿಸಿದ್ದೇನೆ. ಅವನ ಅಗಲಿಕೆಯ ಆಘಾತದಿಂದ ಇನ್ನೂ ಹೊರ ಬರಲು ಸಾಧ್ಯವಿಲ್ಲದ್ದಿದ್ದರೂ, ಕಷ್ಟಪಟ್ಟು ಅವನ ಕುರಿತು ಬರೆಯಬೇಕೆಂದುಕೊಂಡಿದ್ದೇನೆ. ಟಿವಿ ಮಾಧ್ಯಮದ ತೆರೆಮರೆಯಲ್ಲಿ ಶ್ರೇಷ್ಠ ಸಾಧನೆಗೈದ ಈ ಚೇತನದ ಕುರಿತು ನಿಮಗನ್ನಿಸಿದ್ದನ್ನ ಹೇಳಿ...... ಈ ಬ್ಲಾಗ್ ನಲ್ಲಿ ನಾವೆಲ್ಲರೂ ಸೇರಿ ಮುದ್ರಿಸೋಣ.
-
ಇಂತಿ
ನಿಮ್ಮವ
