Sunday, April 22, 2007

ಇದೆ ಮಾನವೀಯತೆ.....



ಇದು ಬೆಂಗಳೂರು. ದಿನೇ ದಿನೇ ಬೆಳೆಯುತ್ತಿದೆ.... ಜೀವನ ಶೈಲಿಯೂ ಸಹ ಬದಲಾಗುತ್ತಿದೆ. ಬೆಳಿಗಿನ ವೇಳೆ ಒಮ್ಮೆ ಮೆಜೆಸ್ಟಿಕ್ ಬಸ್ಟಾಂಡ್ ಎಂಬ ಮಹಾ ಜಂಕ್ಶನ್ನಲ್ಲಿ ನಿಂತರೆ ಸಾಕು ವಿಧ ವಿಧದ ಜನ ವಿವಿಧ ಭಾಷೆಯಲ್ಲಿ ಮಾತಾಡ್ತ ಹೋಗೋದನ್ನ ನಾವು ನೋಡ್ತೇವೆ. ಪ್ರತಿಯೊಬ್ಬರಿಗೂ ಅವರದೇ ಆದ ಅವಸರ...... ಅವರದೇ ಆದ ವೇಗ....... ತನ್ನದೆ ಆದ ನಡಿಗೆ..! ನೂರಕ್ಕೆ ತೊಂಬತ್ತೊಂತ್ತೊಂಬತ್ತರಷ್ಟು ಜನ ಅವಸರದಲ್ಲಿರುವುದಂತೂ ನಿಜ. ಇಂತಹ ವೇಳೆನಲ್ಲಿ ಯಾರಿಗೆ ತಾನೆ ಪುರುಸೊತ್ತಿರುತ್ತೆ..? ಎಲ್ಲರಿಗೂ ಬಸ್ ಹಿಡಿದು ಬೇಗ ತಂತಮ್ಮ ಕಚೇರಿ ಸೇರೋ ತವಕ..! ನಾನು ಹೇಳೊಕೆ ಹೊರಟಿರೊ ವಿಷಯ ಇಷ್ಟೆ ನನ್ನ ಕಣ್ಮುಂದೆ ನಡೆದ ನೈಜ ಘಟನೆಯನ್ನ ನಿಮಗೆ ಹೇಳಬೇಕಾಗಿದೆ. ಇಷ್ಟೆಲ್ಲಾ ಹೇಳ್ಳೇ ಬೇಕು ಅನ್ನಿಸ್ತು... ಇದು ಮನುಷ್ಯನಿಗೆ ಏನು ಅಲ್ಲ. ಆದರೆ ಈ ಕಥೆಯ ಹಿಂದೆ ಒಂದು ಜೀವದ ಪ್ರಶ್ನೆ ಇದೆ.....

ಇಂದು ಬೆಳಿಗ್ಗೆ ಸುಮಾರು ೧೦.೪೫ ನಿಮಿಷ. ನಮ್ಮ ಕಚೇರಿಯ ಕಾರಿನಲ್ಲಿ ಮನೆಯಿಂದ ಕಚೇರಿಗೆ ಅರ್ಜೆಂಟಾಗಿ ಹೊರಟಿದ್ದೆ. ರಸ್ತೆ ಮದ್ಯದಲ್ಲಿ ಅಳಿಲು ಬಿದ್ದಿತ್ತು. ಅದನ್ನ ನೊಡಿದ್ರೆ ಸತ್ತಿರೊ ಹಾಗಂತೂ ಕಾಣುತ್ತಿರಲಿಲ್ಲ. ಹತ್ತಿರಕ್ಕೆ ನಮ್ಮ ವಾಹನ ಹೋಗುತ್ತಿದ್ದಂತೆ ಸತ್ತಿಲ್ಲದಿರುವುದು ನನಗೆ ಖಚಿತವಾಯ್ತು. ನಮ್ಮ ಚಾಲಕನಿಗೆ ಕಿರುಚಿ ಹೇಳಿದೆ ಅದನ್ನ ತಪ್ಪಿಸು. ಅದರ ಮೇಲೆ ಹೊಡಿಬೇಡ ಅನ್ನೊವಷ್ಟರಲ್ಲಿ ಎದುರಿಗೆ ಒಂದು ಕಾರ್ ಇನ್ನೇನು ಅದರ ಮೇಲೆ ಹೊಡಿತು. ಅಯ್ಯೊ....? ಅಂದೆ ಪುಣ್ಯ ಸ್ವಲ್ಪದ್ರಲ್ಲೆ ತಪ್ತು. ನಮ್ಮ ಕಾರ್ ಡ್ರೈವರ್ ಮುಂದೆ ರಸ್ತೆ ಬದಿಗೆ ನಿಲ್ಲುಸ್ದ. ಅದನ್ನ ಎತ್ಕೊಂಡು ಬರೋಣ ಅಂತ ತರಾತುರಿನಲ್ಲಿ ಡೊರ್ ತೆಗೆದು ಇಳಿದು ನೊಡಿದ್ರೆ. ನಮ್ಮ ಕಾರ್ ಹಿಂದೆ ಬೈಕ್ ನಿಲ್ಲಿಸಿದ ಒಬ್ಬ ವ್ಯಕ್ತಿ ಸರ್ರನೆ ಆ ಅಳಿಲನ್ನ ತನ್ನ ಕೈಗೆತ್ತಿಕೊಂಡು ರಸ್ತೆ ಬದಿ ಸಣ್ಣಗುಂಡಿಯಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಅದ್ದಿ ಪಕ್ಕದಲ್ಲಿ ಬಿಟ್ಟ. ಕೃತಜ್ಞತೆ ಎಂಬಂತೆ ಒಮ್ಮೆ ಅವನನ್ನ ನೋಡಿ ನಿಧಾನವಾಗಿ ಮುಂದೆ ಸಾಗಿತು. ಅಬ್ಬಾ..... ಅಂದವನೆ. ತಕ್ಷಣ ಕಾರ್ ಏರಿದೆ. ಏಕೆಂದ್ರೆ ನಾವು ನಿಂತ ಜಾಗದಲ್ಲಿ ನೋ ಪಾರ್ಕಿಂಗ್ ಎಂದು ಬರೆದ ಫಲಕವಿತ್ತು. ಆ ಅಳಿಲು ಮರದ ಮೇಲಿಂದ ಆಗ ತಾನೆ ಬಿದ್ದಿತ್ತು. ಸುದೈವವಷಾತ್ ಆ ವ್ಯಕ್ತಿ ದೇವರಂತೆ ಕಾಪಾಡಿದ. ಇಷ್ಟೊಂದು ಬ್ಯುಸಿಯಾಗಿರುವ ಬೆಂಗಳೂರಲ್ಲೂ ಮಾನವೀಯತೆ ಅನ್ನೊದು ಇದೆ ಅಂತ ಸ್ಪಷ್ಟವಾಯ್ತು. ರಿಯಲಿ ಆ ಮನುಷ್ಯನಿಗೆ ಥ್ಯಾಂಕ್ಸ್

2 comments:

Shree said...
This comment has been removed by the author.
nagarajks said...

chennagide boss nanage nodi kushi patte.